Sangolli Rayanna memorial at Nandghad

Nandagad was on our agenda for the day we visited Ramteerth. We got directions to Sangolli Rayanna's memorial. Sangolli Rayanna was Kittur Rani Chennamma's trusted lieutenant. We heard about the Banyan tree from which Sangolli Rayanna was hanged to death by the Britishers. Our first stop was at the memorial.


Rayanna's mortal remains lie buried under this ficus.The black board says "freedom fighter Sangolli Rayanna's Samadhi."

The engraving on the Asoka Stamba.


ನಾಡಿನ ಬಿಡುಗಡೆಗಾಗಿ ಬ್ರಿಟಿಷರೊಡನೆ ಹೋರಾಡಿ ಬಲಿದಾನ ಮಾಡಿದ ಕನ್ನಡ ಕಡುಗಲಿ ಸಂಗೊಳ್ಳಿ ರಾಯಣ್ಣನ ಜಾಗೃತಿ ಸ್ಮರಣೆಗೆ which translates to "Memorial to the brave warrior Sangolli Rayanna who sacrificed his life fighting for freedom of the land."


Transcription of the board- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಂಕ್ಷಿಪ್ತ ಇತಿಹಾಸ
ಶ್ರೀ ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ. ಈತನ ದೇಹದ ಕಣಕಣದಲ್ಲೂ ಕನ್ನಡದ ಶೌರ್ಯ, ಸಾಹಸಗಲಿದ್ದವು. ಸೂರ್ಯ ಮುಳುಗುವ ದೇಶದ ಬ್ರಿಟಿಷರಿಗೆ ಈತ ಸಿಂಹಸ್ವಾಪ್ವಗಿದ್ದ. ಕಿತ್ತೂರು ಚೆನ್ನಮ್ಮಜಿಗೆ ನೆಚ್ಚಿನ ಬಂಟನಾಗಿದ್ದ. ೧೮೨೪ ರಲ್ಲಿ ಕಿತ್ತುರಿಗೆ ಸೋಲಾಯಿತು. ಅನಂತರ ರಾಯಣ್ಣ ಕಿತ್ತುರಿಗೆ ಮತ್ತೆ ಸ್ವಾತಂತ್ರ್ಯ ತಂದು ಕೊಡಲು ಪಣ ತೊಟ್ಟ. ಈತ ೧೭೬೬ ಆಗಸ್ಟ್ ೧೫ ರಂದು ಸಂಗೊಲ್ಲಿಯೇಲ್ಲಿ ಹುಟ್ಟಿದ್ದ. ಈತನ ತಾಯಿ ಕೆಂಚವ್ವ, ತಂದೆ ಬರಮಣ್ಣ ಓಲೆಕಾರಿಕೆ ಇವರ ವೃತ್ತಿ. ಸಣ್ಣವನಿರುವಾಗಲೇ ಯುದ್ದದ ತರಬೇತಿ ಪಡೆದಿದ್ದ. ೧-೧-೧೮೨೯ ರಿಂದ ೭-೪-೧೮೩೦ ರ ಅವದಿಯಲ್ಲಿ ಕಿತ್ತೂರ ನಾಡಿನಲ್ಲಿ ಸಂಚರಿಸಿದ. ತನ್ನ ಸೈನ್ಯವನ್ನು ಕಟ್ಟಿದ. ಥ್ಯಾಕರೆ ನಿದನದನಂತರ ಚಾಪ್ಲಯಾಣನ ಆಡಳಿತ. ಒಮ್ಮೆ ಬ್ರಿಟಿಷರು ಕಿತ್ತೂರಿನ ಮೇಲೆ ದಂಡೆತ್ತಿ ಬಂದರು ರಾಯಣ್ಣ ಕಿತ್ತೂರಿನ ಹುಲಿಯಾಗಿ ಹೋರಾಡಿದ. ಬ್ರಿಟಿಷರ ಸೆರೆ ಸಿಕ್ಕರೂ. ನಂತರ ರಾಯಣ್ಣನನ್ನು ಬ್ರಿಟಿಷರ ಯತ್ನ ನಡೆದೇ ಇತ್ತು. ರಾಯನ್ನನದು ಗೆರಿಲ್ಲಾ ಯುದ್ದ ತಂತ್ರ. ಒಮ್ಮೆ ಕುಲಕರ್ಣಿ ಬಾಳಪ್ಪ ಕಂದಾಯ ವಸೂಲಿ ವಿಷಯದಲ್ಲಿ ರಾಯಣ್ಣನ ತಾಯಿಗೆ ಅಪಮಾನ ಮಾಡಿದ ಇದನ್ನು ಸಹಿಸದ ರಾಯಣ್ಣ ಬಾಲಪ್ಪನನ್ನು ತುಂಡರಿಸಿದ. ಈ ಕೃತ್ಯಕ್ಕೆ ಬ್ರಿಟಿಷರು ನಡುಗಿದರು. ರಾಯಣ್ಣ ರೊಚ್ಚಿಗೆದ್ದ. ಸಂಪಗಾವ್, ಬೀಡಿ ಕಚರಿಗಳಿಗೆ ಬೆಂಕಿ ಇಟ್ಟ ಖಜಾನೆಯನ್ನು ಬರಿದು ಮಾಡಿದ. ಇಂಗ್ಲಿಷರಿಗೆ ರಾಯಣ್ಣ ನುನ್ಗಲ್ಲರದ ತುತ್ತಾದ. ಬ್ರಿಟಿಷರನ್ನು ಬಗ್ಗು ಬಡಿಯಲು ಸಂಯವನ್ನು ಐದು ಸಾವಿರದವರೆಗೆ ಹೆಚ್ಚಿಸಿದ. ರಾಯನನ್ನು ಹಿಡಿಯುವ ಹಂಚು ಹಾಕಿದರು. ಕ್ಹೊದನಾಪುರದ ನಿಂಗನಗೌಡ, ನೆಗಿನಹಾಲದ ವೆಂಕನಗೌಡ ಇವರು ರಾಯಣ್ಣನನ್ನು ಹಿಡಿದು ಕೊಡುವುದಾಗಿ ಬ್ರಿಟಿಷರಿಗೆ ಗುಪ್ತವಾಗಿ ಮಾತು ಕೊಟ್ಟರು. ರಾಯಣ್ಣನ ಗುಂಪಿನಲ್ಲಿದ್ದ ಲಕ್ಕಪ್ಪ ನಿಂಗನಗೌಡ ಹಾಗು ವೆಂಕನಗೌಡರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಲಕ್ಕಪ್ಪನ ಸಹಾಯದಿಂದ ರಾಯಣ್ಣನನ್ನು ಹಿಡಿಯುವ ಸಂಚು ಹೂಡಿದರು. ಡೂರಿ ಬೆಣಚಿ ಗುಡ್ಡದಲ್ಲಿ ಒಂದು ನೀರಿನ ಝರಿ ಹರಿದಿದಿತ್ತು. ಅಲ್ಲಿ ರಾಯಣ್ಣ ಸ್ನಾನ ಮಾಡುವ ಸಮಯದಲ್ಲಿ ತನ್ನ ಖಡ್ಗವನ್ನು ಲಕ್ಕಪ್ಪನ ಕೈಗೆ ಕೊಟ್ಟಿದ್ದ. ಎದೆ ಸಂಧರ್ಭವನ್ನು ಲಕ್ಕಪ್ಪ ಉಪಯೋಗಿಸಿಕೊಂಡು ಸಂಜ್ನ್ಯೆ ಕೊಟ್ಟ. ಒಂಬತ್ತು ಜನ ಒಮ್ಮೆಲೇ ಬಂದು ರಾಯಣ್ಣನ ಮೇಲೆ ಬಿದ್ದರು. ರಾಯಣ್ಣ ಸಿಕ್ಕಿ ಬಿದ್ದ. "ಮೋಸದಿಂದ ಹಿಡಿದ ನೀವು ಗಂಡಸರೇ" ಎಂದು ಚೀರಿದ. ಅಂದು ದಿನಾಂಕ ೧೮-೪-೧೮೩೦ ಆಗಿತ್ತು. ನಂತರ ವಿಚಾರಣೆ ನಟಕ ಮಾಡಿದರು. ದಿನಾಂಕ ೨೯-೧-೧೮೩೧ ರಂದು ನಂದಘದದಲ್ಲಿ ಗಲ್ಲಿಗೇರಿಸಲಾಯಿತು. ಈ ಸ್ತಿತಿ ನೋಡಿ ಜನ ಕಣ್ಣಿರಿನ ಕೋಡಿ ಹರಿಸಿದರು. ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ ರಾಯಣ್ಣ ಪ್ರಾಣ ಜ್ಯೋತಿ ನಂದಘದದಲ್ಲಿ ನಂದಿ ಹೂಯೋತು. ಬಿಚ್ಚಿಗಟ್ಟಿ ಚೆನ್ನಬಸಪ್ಪ ರಾಯಣ್ಣನ ಜೀವ ಗೆಳಯ, ರಾಯಣ್ಣನ ಋಣ ತೀರಿಸಲು ಮಾರು ವೇಷದಲ್ಲಿ ಬಂದು ರಾಯಣ್ಣನ ಸಮಾಧಿಯ ಮೇಲೆ ಆಳದ ಸಸಿಯೊಂದನ್ನು ನೆಟ್ಟಿದ. ಆ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆ ಗಿಡದ ಪ್ರತಿಯೊಂದು ಹೂವು, ಎಲೆ, ದೆತುಗಳು ರಾಯಣ್ಣನ ಸಾಹಸಕ್ಕೆ ಮೂಕಸಾಕ್ಷಿಯಾಗಿವೆ. ರಾಯಣ್ಣ ದೇವತಾ ಪುರುಷನಾದ, ಹೀಗೆ ಸಂಗೊಳ್ಳಿ ರಾಯಣ್ಣ ಒಂದು ದಂತ ಕತೆಯಾಗಿ ನಮ್ಮೆಲ್ಲರ ಮನದಲ್ಲಿ ಊಲಿದಿದೆ.
The place of execution is about 4km from the memorial. Anybody in Nandagad will give you directions ...in Marathi.

Sangolli Rayanna was hanged from one of the branches just behind this little temple. The video might help... A local woman herding her buffaloes showed us a spot marked with few stones but there were no branches above the spot. We guessed the branch must have broken off ...the incident took place way back 1830, that's 180 years back.
It would be good if the tree is fenced and a board fixed stating the tree's importance.

.........

◄ Newer Post Older Post ►
eXTReMe Tracker
 

Copyright 2011 Journeys to temple is proudly powered by blogger.com